ಆಲಿಸಿರಿ ದೊರೆಗಳೇ..!
|| ಹರೇರಾಮ ||
ಶತಮಾನಗಳ ಹಿಂದಿನ ಮಾತು..
ಇಂದೋರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಭಾರತದ ಹೃದಯ ಪ್ರದೇಶವನ್ನು ಆಳುತ್ತಿದ್ದ ಕಾಲ..
ತನ್ನ ನಡೆ ನುಡಿಗಳಿಂದ ಆಕೆ ದೇವತುಲ್ಯಳಾಗಿದ್ದುದರಿಂದಲೋ ಏನೋ ಜನತೆ ಆಕೆಯನ್ನು ‘ದೇವಿ’ ಎಂದೇ ಸಂಬೋಧಿಸುತ್ತಿದ್ದಿತು..!
ಆಕೆ ಮಾಡಿದ ಸತ್ಕಾರ್ಯಗಳಿಗೆ ಲೆಖ್ಖವೇ ಇಲ್ಲ..!
ಮಾಲೋಜಿರಾವ್ ಆಕೆಯ ಏಕಮಾತ್ರ ಪುತ್ರ…
ಆದರೆ ಅವರೀರ್ವರ ಸ್ವಭಾವದಲ್ಲಿ ಭೂಮಿ ಆಕಾಶಗಳ ಅಂತರವಿದ್ದಿತು..!!
ನ್ಯಾಯ-ಧರ್ಮಗಳ ಮರ್ಯಾದೆ ಮೀರದ, ಶಿಸ್ತು – ಸಂಯಮಗಳ ವ್ಯಕ್ತಿತ್ವ ಅಹಲ್ಯಾಬಾಯಿಯದ್ದಾದರೆ..
ಹುಚ್ಚು ಹೊಳೆಯ ಹೋಲುವ ಪುಂಡಾಟಿಕೆ ಮಾಲೋಜಿಯಲ್ಲಿ ಬಾಲ್ಯದಿಂದಲೇ ಬೆಳೆದುಬಂದಿತ್ತು..
ಒಂದುದಿನ…
ಇಂದೋರಿನ ರಸ್ತೆಯೊಂದರಲ್ಲಿ ಮದವೇರಿದ ಮಾಲೋಜಿ ರಥವೇರಿ ಬರುತ್ತಿದ್ದ ಸಮಯ..
ಅಲ್ಲೊಂದು ಕಣ್ಸೆಳೆಯುವ ದೃಶ್ಯ..!
ಅಮ್ಮನಿತ್ತ ಅಮೃತವನ್ನು ಭರಪೂರ ಕುಡಿದು, ಆ ಸಂಭ್ರಮದಲ್ಲಿ ಮಾರ್ಗ ಮಧ್ಯೆ ಮನದಣಿಯೆ ಕುಣಿದು – ಕುಪ್ಪಳಿಸುತ್ತಿದ್ದ ಪುಟ್ಟ ಕರು..!!
ಮಾರ್ಗದ ಪಾಶ್ವ೯ದಲ್ಲಿ ನಿಂತು ಒಡಲಾಳದ ಮಮತೆಯ ಸಾಗರವನ್ನೇ ಹೊರಸೂಸುವಂತೆ ಪ್ರೇಮ – ಕಾಳಜಿಗಳು ತುಂಬಿದ ನೋಟದಿಂದ ಕರುವನ್ನೇ ದಿಟ್ಟಿಸುವ ತಾಯಿ ಹಸು..!
ಹೃದಯವಿದ್ದವರೆಲ್ಲವರೂ ಒಮ್ಮೆ ನಿಂತು ನೋಡಲೇಬೇಕಾದ ದೃಶ್ಯವದು..!!
ಕಣ್ಣಿದ್ದರೇನಾಯಿತು..? ಕಣ್ಣಲ್ಲಿ ಕರುಣೆಯಿರಬೇಕಲ್ಲವೇ..?
ಮದಾಂಧ ಮಾಲೋಜಿಯ ರಥ ಮುಗ್ಧಕರುವಿನ ಮೇಲೇರಿಹೋಯಿತು..!!!
ಜನ್ಮವಿತ್ತ ಜನನಿಯ ಕಣ್ಣೆದುರೇ ಎಳೆಯ ಜೀವವೊಂದರ ಜೀವನವೇ ನುಚ್ಚುನೂರಾಗಿಹೋಯಿತು..!!!!
ಹೃದಯವಿದ್ದವರೆಲ್ಲರೂ ಕರಗಿ ಕಣ್ಣೀರ್ಮಿಡಿಯುವ ದೃಶ್ಯವದು…!!!
ತನ್ನ ಕರುಳಕುಡಿಯ ಅವಶೇಷಗಳೆದುರು ಬಹುಕಾಲ ರೋದಿಸಿದ ಗೋವು ಮತ್ತೆ ಅರಮನೆಯೆಡೆಗೆ ಧಾವಿಸಿತು…!
ಅರಮನೆಯ ಹೆಬ್ಬಾಗಿಲಿನಲ್ಲಿ ತ್ವರಿತನ್ಯಾಯದಾನಕ್ಕಾಗಿ ದೊಡ್ಡಘಂಟೆಯೊಂದು ಕಟ್ಟಲ್ಪಟ್ಟಿತ್ತು..!
ಘಂಟೆಯ ನಾಲಗೆಯನ್ನು ಸುತ್ತಿದ ಸೂತ್ರವೊಂದು ನ್ಯಾಯಾಪೇಕ್ಷಿಗಳ ಸೌಕರ್ಯಕ್ಕಾಗಿ ನೆಲದವರೆಗೆ ಇಳಿಬಿಡಲ್ಪಟ್ಟಿತ್ತು…!!
ಪುತ್ರಶೋಕದಿಂದ ಸಂತಪ್ತಗೊಂಡಿದ್ದ, ಅರಮನೆಯಿಂದಲೇ ಆಗಿಹೋದ ಅನ್ಯಾಯದಿಂದ ಆಕ್ರೋಶಗೊಂಡಿದ್ದ ಗೋವು ಎಂದೆಂದೂ ಮಾತನಾಡದ ತನ್ನ ಬಾಯಿಯಿಂದಲೇ ಘಂಟೆಯ ಸೂತ್ರವನ್ನು ಕಚ್ಚಿಹಿಡಿದೆಳೆದು ಬಾರಿಸತೊಡಗಿತು.. !
ಬುದ್ಧಿಜೀವಿಗಳೆಲ್ಲರೂ ಆಲಿಸಿ-ಕೇಳಿ ಎಚ್ಚೆತ್ತುಕೊಳ್ಳಬೇಕಾದ ಎಚ್ಚರಿಕೆಯ ಘಂಟೆಯದು.. !!!
ಘಂಟೆಯ ಸದ್ದುಕೇಳಿ ಹೊರಬಂದ ಅಹಲ್ಯಾಬಾಯಿ ತನ್ನ ಕಣ್ಣುಗಳನ್ನೇ ತಾನು ನಂಬಲಿಲ್ಲ.. !!
ನ್ಯಾಯ ಕೇಳಲು ಮಾತು ಬರುವ ಮನುಷ್ಯರಾರೂ ಬಂದಿರಲಿಲ್ಲ..
ಮಾತೇ ಬಾರದ ಗೋಮಾತೆ ಮಾತಿಗೆ ಮೀರಿದ ವೇದನೆಯನ್ನು ಘಂಟಾನಾದದ ರೂಪದಲ್ಲಿ ವ್ಯಕ್ತಪಡಿಸಿದ್ದಳು..!
ನೋವಿಗೆ ನಡುಗುವ ಒಡಲಿನ, ಮಿಡಿವ ಕಂಬನಿಯ ಕಣ್ಣುಗಳ ಕಾಮಧೇನುವನ್ನು ಕಂಡಾಗ ಮಹಾರಾಣಿಯ ಕರುಳು ಚುರ್ರೆಂದಿತು..!
ಕ್ಷಣಮಾತ್ರದಲ್ಲಿ ಗೋವಿನ ಮಾಲೀಕನಿಗೆ ಕರೆಹೋಯಿತು..!!
ಕೆಲಹೊತ್ತಿನಲ್ಲಿಯೇ ತನ್ನೆದುರು ಕೈಮುಗಿದು ನಿಂತ ಗೋಪಾಲಕನನ್ನು ರಾಣಿ ಪ್ರಶ್ನಿಸಿದಳು..
” ನಿನ್ನಗೋವು ನ್ಯಾಯದ ಘಂಟೆ ಬಡಿಯಲು ಕಾರಣವೇನು..?
ಕಾಲ – ಕಾಲಕ್ಕೆ ನೀನು ಹುಲ್ಲು-ನೀರುಗಳನ್ನು ಸರಿಯಾಗಿನೀಡುತ್ತಿಲ್ಲವೇನು ..? ”
” ದೇವಿ !
ಗೋಸೇವೆಯೇ ನನ್ನ ಬದುಕು..
ನಾನು ಉಪವಾಸವಿದ್ದೇನು..!
ಆದರೆ ನನ್ನ ಮತ್ತು ನನ್ನವರೆಲ್ಲರ ಹಸಿವು ಹಿಂಗಿಸುವ ಹಸುವು ಹಸಿದಿರುವ ಪ್ರಶ್ನೆಯೇ ಇಲ್ಲ..!
ಆದರೆ ಹಸುವಿಗೆ ಅನ್ಯಾಯವಾದದ್ದಂತೂ ನಿಜ..
ಅದು ಯಾರಿಂದ ಎಂದು ತಿಳಿಸಲು ನನಗೆ ಪ್ರಾಣಭಯವಿದೆ..”
ಮಹಾರಾಣಿ ನಿರ್ಭೀತಿಯಿಂದ – ನಿರ್ಭಿಡೆಯಿಂದ ಸತ್ಯವನ್ನು ಹೇಳೆಂದು ಅಭಯವಿತ್ತಾಗ ಗೋಪಾಲಕ ಸತ್ಯವನ್ನು ನುಡಿದ..!!
ಗೋವಿನ ಕರುಳಕುಡಿಯನ್ನು ಹೊಸಕಿ ಹಾಕಿದ್ದು ತನ್ನ ಕರುಳ ಕುಡಿಯೆಂಬುದನ್ನು ತಿಳಿದು ಖತಿಗೊಂಡಳು ಅಹಲ್ಯಾಬಾಯಿ…!!
ಕ್ಷಣಹೊತ್ತು ತನ್ನಲ್ಲೇ ಚಿಂತಿಸಿ…
ಮಾಲೋಜಿಯ ಮಡದಿಯರಿಬ್ಬರನ್ನೂ ಸಭಾಸ್ಥಾನಕ್ಕೆ ಕರೆಯಿಸಿ ಕೇಳಿದಳು..
” ನಿಷ್ಕಾರಣವಾಗಿ ಜೀವವೊಂದರ ನಿರ್ದಯ ಹತ್ಯೆಗೈದವನಿಗೆ ದಂಡವೇನು..? ”
ಸೊಸೆಯರು ಅತ್ತೆಯ ಸಂಸ್ಕಾರಕ್ಕೆ ತಕ್ಕ ಉತ್ತರವನ್ನೇ ಇತ್ತರು..!
” ಅಂಥವನಿಗೆ ಅದೇ ರೀತಿಯ ಮೃತ್ಯುವೇ ಯೋಗ್ಯ ಶಿಕ್ಷೆ ”
ಅಹಲ್ಯಾಬಾಯಿಯ ಅಂತರಂಗದ ಕಣ್ಣಮುಂದೆ ಜೀವನ ಮೌಲ್ಯಗಳ ತಕ್ಕಡಿ ತೂಗತೊಡಗಿತು..!!
ಒಂದೆಡೆಗೆ ಮಗ ಮಾಲೋಜಿ ಮತ್ತು ಮಾತೃವಾತ್ಸಲ್ಯ..!
ಇನ್ನೊಂದೆಡೆಗೆ ಗೋವಿಗಾದ ಅನ್ಯಾಯ ಮತ್ತು ಆ ಕುರಿತು ಸಿಂಹಾಸನದ ಕರ್ತವ್ಯ..!
ಮಾಲೋಜಿಯ ರಥಚಕ್ರದಡಿಯಲ್ಲಿ ಛಿದ್ರ ಛಿದ್ರವಾದ ಎಳೆಗರುವಿನ ರೂಪವನ್ನು ಕಲ್ಪಿಸಿಕೊಂಡಾಗ..
ಸರ್ವಲೋಕ ಶುಭಂಕರಿಯಾದ ಗೋಮಾತೆಯ ಕಂಬನಿಯ ಮುಖ ಕಣ್ಮುಂದೆ ಬಂದಾಗ ಅಹಲ್ಯಾಬಾಯಿಯ ಹೃದಯ ವಜ್ರಕಠೋರವಾಯಿತು..!
ಆಕೆಯ ಮುಖದಿಂದ ಆಜ್ಞೆಯೆಂಬ ಅಗ್ನಿಯ ಮಳೆ ಹೊರಹೊಮ್ಮಿತು..!!
ಮಾಲೋಜಿಯ ಕೈ-ಕಾಲು ಕಟ್ಟಿ, ಕರುವಿನ ಪ್ರಾಣಹರಣವಾದ ಸ್ಥಳದಲ್ಲಿಯೇ ಕೆಡವಬೇಕೆಂಬುದಾಗಿಯೂ, ಯಾವ ರಥವೇರಿ
ಆ ಘೋರ ಕೃತ್ಯವನ್ನಾತ ನಡೆಸಿದ್ದನೋ ಅದೇ ರಥವನ್ನು ಆತನಮೇಲೆ ಹರಿಯಿಸಬೇಕೆಂಬುದಾಗಿಯೂ ಶಿಕ್ಷೆಯ ಸ್ವರೂಪವಾಗಿದ್ದಿತು..!
ಇದಿರಿಲ್ಲದ ಆದೇಶವದು….!!
ರಾಜಾಜ್ಞೆಯಂತೆ ಮಾಲೋಜಿಯ ಕೈ-ಕಾಲು ಕಟ್ಟಿ ಅದೇ ಸ್ಥಳದಲ್ಲಿ ಕೆಡವಲಾಯಿತು..!
ರಾಜರಥ ಮಾಲೋಜಿಯ ಮೇಲೇರಿ ಹೋಗಲು ಸಿದ್ಧವಾಗಿ ನಿಂತಿತು..!!
ಕರುವಿನ ಶರೀರಕ್ಕೇನಾಯಿತೋ ಅದು ಮಾಲೋಜಿಯ ಮನಸ್ಸಿಗಾಗತೊಡಗಿತು..!!!(?)
ಆದರೆ ಸಾರಥಿ ದೇವಿಯ ಕಾಲುಹಿಡಿದು – ಕೈ ಮುಗಿದು ಕಣ್ಣೀರಿಟ್ಟು ನಿವೇದಿಸಿಕೊಂಡ..
” ಇದು ನನ್ನಿಂದಾಗದು ಬೇಕಿದ್ದರೆ ನನಗೇ ಮೃತ್ಯುದಂಡವಾಗಲಿ, ರಾಜಕುಲದ ಏಕೈಕ ಕುಡಿಯನ್ನು ನನ್ನ ಕೈಯಿಂದ ನಾನು ಕಮರಿಸಲಾರೆ ”
ಕೊನೆಗೆ ಯಾರೂ ಆ ಕಾರ್ಯಕ್ಕೆ ಸಿದ್ಧರಾಗದಿದ್ದಾಗ ಸ್ವಯಂ ರಾಣಿಯೇ ರಥವೇರಿದಳು..!!!!!!!!!!!!!!!!!!!!!!!!
ಆ ಕ್ಷಣದಲ್ಲಿ ಆಕೆ ತಾಯಿಯಾಗಿರಲಿಲ್ಲ… ಮೈವೆತ್ತ ನ್ಯಾಯವಾಗಿದ್ದಳು..!
ಮಮತೆಯ ಕಣ್ಮುಚ್ಚಿ ಸತ್ಯದ ಕಣ್ತೆರೆದಿದ್ದಳು..!!
ತೊಟ್ಟಿಲು ತೂಗಿದ ಕೈಗಳಿಂದಲೇ ಮಗನಿಗೆ ಮಸಣವೀಯುವ ಕಡಿವಾಣಗಳನ್ನು ಹಿಡಿದಿದ್ದಳು..!!!
ಭೂಮಿಯೇ ಬಾಯ್ಬಿಡುವಂತೆ ಮೃತ್ಯುರಥ ಮಾಲೋಜಿಯೆಡೆಗೆ ಧಾವಿಸಿತು..!
ರಥ ಚಕ್ರಗಳ ಘೋಷ ಮಾಲೋಜಿಯ ಕಿವಿಗಳಿಗೆ ಮರಣ ಮೃದಂಗದಂತೆ ಕೇಳಿಸತೊಡಗಿತು..!
ಇನ್ನೇನು ಮಾಲೋಜಿ ಮೃತ್ಯುವಿನ ಮನೆ ಸೇರಬೇಕು…..
ಅಷ್ಟರಲ್ಲಿ ಅಘಟಿತ ಘಟನೆಯೊಂದು ಘಟಿಸಿತು..!
ಯಾವ ತಾಯಿಯ ಕರುವನ್ನು ಮಾಲೋಜಿ ನಿರ್ದಯವಾಗಿ ಹತ್ಯೆ ಗೈದಿದ್ದನೋ ಅದೇ ಗೋವು ರಾಜ ರಥಕ್ಕೆ ಅಡ್ಡವಾಗಿ ನಿಂತಿತ್ತು…!!
ರಥ ನಿಲ್ಲಿಸದೇ ದೇವಿಗೆ ಬೇರೆ ದಾರಿಯೇ ಇರಲಿಲ್ಲ..!
ಇದೊಂದು ಆಕಸ್ಮಿಕವಿರಬಹುದೆಂದು ಭಾವಿಸಿದ ರಾಣಿ ಗೋವನ್ನು ಪಕ್ಕಕ್ಕೆ ಸರಿಸಿ ಇನ್ನೊಮ್ಮೆ ರಥ ಓಡಿಸಿದಳು ಮಾಲೋಜಿಯೆಡೆಗೆ…!
ದೇವಿಯ ನ್ಯಾಯನೈಷ್ಠುರ್ಯವೆಷ್ಟು ದೊಡ್ಡದೋ ಅದಕ್ಕಿಂತ ಹಿರಿದಾದುದು ಗೋಮಾತೆಯ ಕಾರುಣ್ಯ…..!!
ಧಗಧಗಿಸಿ ಉರಿಯುವ ಕಾಳ್ಗಿಚ್ಚನ್ನು ತಣಿಸುವ ತಂಪುಮಳೆಯಂತೆ..
ಮಗು ಮಾರ್ಕಂಡೇಯನನ್ನುಳಿಸಲು ಮೃತ್ಯುವಿನೆದುರು ನಿಂತ ಮೃತ್ಯುಂಜಯನಂತೆ ..
ಮತ್ತೊಮ್ಮೆ ರಾಣಿಯ ರಥದ ಪಥದಲ್ಲಿ ನಿಂತು ಗೋಮಾತೆ ಮಾಲೋಜಿಯನ್ನು ರಕ್ಷಿಸಿದಳು..!!!
ಸೇರಿದವರ ಸಾವಿರಾರು ಕಂಠಗಳು ಗೋಮಾತೆಗೆ ಜಯಘೋಷ ಮಾಡಿದವು..!
ಮಾಲೋಜಿಯ ಕಣ್ಣುಗಳು ಕಂಬನಿಗರೆದವು..!!
ಅಹಲ್ಯಾಬಾಯಿಯ ತಲೆ ಬಾಗಿತು..!!
ನ್ಯಾಯ ನೈಷ್ಠುರ್ಯ ಮತ್ತು ಪರಮ ಕಾರುಣ್ಯಗಳ ಪರಾಕಾಷ್ಠೆಯನ್ನು ಈ ಜಗತ್ತು ಕಂಡ ಕ್ಷಣಗಳವು..!!
ಅಂದಿನ ಆ ಅಮರ ಘಟನೆಯ ಕುರುಹಾಗಿ ಇಂದೋರಿನಲ್ಲಿ ಆ ಸ್ಥಳಕ್ಕೆ ಇಂದೂ ”ಆಡಾ” ಬಝಾರ್ ಎಂದೇ ಹೆಸರಿದೆ..
( ಕನ್ನಡದಲ್ಲಿ ನಾವು ಯಾವುದನ್ನು ಅಡ್ಡ ಎಂದು ಹೇಳುತ್ತೇವೆಯೋ ಅದೇ ಅರ್ಥದಲ್ಲಿ ಹಿಂದಿಯಲ್ಲಿ ಆಡಾ ಎಂಬ ಶಬ್ಧ ಬಳಕೆಯಲ್ಲಿದೆ )
ಗೋವು ಮಾಲೋಜಿಯನ್ನು ರಕ್ಷಿಸಲು ಅಡ್ಡನಿಂತ ಕಾರಣ ಆ ಸ್ಥಳಕ್ಕೆ ಆಡಾ ಬಝಾರ್ ಎಂದು ಹೆಸರಾಯಿತು..
ಓ ಅಹಲ್ಯಾಬಾಯಿಯ ಭಾರತದ ಇಂದಿನ ದೊರೆಗಳೇ…!
ಆಲಿಸಿರಿ….
ಕೇಳಿಸಲಿಲ್ಲವೇನು ಘಂಟಾನಾದ . . . ?
ಅಂದು ಒಬ್ಬಮಾಲೋಜಿ…
ಒಂದು ಕರು…
ಒಂದು ಹಸು…
ಒಂದು ಘಂಟಾನಾದ..
ಇಂದು………..???????????
ಲೆಖ್ಖವಿದೆಯೇ ನಿಮ್ಮದೇ ನಾಡಿನಲ್ಲಿ ನಿರ್ದಯವಾದ, ನಿಷ್ಕಾರಣವಾದ ಹತ್ಯೆಗೊಳಗಾಗುತ್ತಿರುವ ಮುಗ್ಧ, ನಿರಪರಾಧಿ ಗೋವು-ಕರುಗಳಿಗೆ..!!
ಅಂದು ಮಾಲೋಜಿಯಂದ ಹತ್ಯೆಗೀಡಾದ ಕರುವಿಗೆ ಕೊನೆಯ ಪಕ್ಷ ಹುಟ್ಟಲಾದರೂ ಅವಕಾಶವಿತ್ತು…
ಇಂದು…???
ಅಮಾಯಕ ಕರುವಿಗೆ ಅಮ್ಮನ ಹೊಟ್ಟೆಯಲ್ಲಿಯೇ ಚೂರಿಯ ದರ್ಶನ.. ಇದು ನಿಮಗೆ ಚೆನ್ನಾಗಿ ತಿಳಿದಿರಬೇಕಲ್ಲವೇ..?
2.ಈಗಲಾದರೂ ಎದ್ದೇಳಿ ....
ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿ ಎಂದು ಹೇಳಿಕೊಂಡಿರುವ ನಾವು ಈಗ ಅದರ ಸಂಕಷ್ಟವನ್ನು ನೋಡ ಬೇಕಾದ ದೌರ್ಭಾಗ್ಯ ಒದಗಿ ಬಂದಿದೆ.ಈಗ ಇವು ಬಹಳ ಕಷ್ಟದ ಸ್ಥಿತಿಯಲ್ಲಿ ಇವೆ. ಇದು ಭಾರತೀಯರಿಗೆ ಬಹಳ ನಚೀಕೆಯ ವಿಷಯವಾಗಿದೆ. ಒಂದು ವೇಳೆ ಭಾರತೀಯ ಹುಲಿಗಳೆಲ್ಲ ನೆರವಾಗಿ ಅಥವಾ ಪರೋಕ್ಷವಾಗಿ ಮಾನವನಿಂದ ಹಿಂಸೆಗೆ ಒಳಗಾದರೆ ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಗೆ ಇವುಗಳನ್ನೂ ಚಿತ್ರಗಳಲ್ಲಿ ತೋರಿಸುವ ಸ್ಥಿತಿ ಒದಗಿ ಬರೋದರಲ್ಲಿ ಆಶ್ಚರ್ಯವೇನೂ ಇಲ್ಲ...ಡೈನೋಸಾರ್ ಇದಕ್ಕೆ ಉತ್ತಮ ಉದಾಹರಣೆ.
ಮೊನ್ನೆ ಮೊನ್ನೆ ಯಾವುದೊ ಪತ್ರಿಕೆಯಲ್ಲಿ ಓದಿದ್ದೆ ಬನ್ನೇರು ಘಟ್ಟ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದ ದುರ್ಘಟನೆ. ಹರಾಕ್ ಗುಂಪಿಗೆ ಸೇರಿದ 16 ವರ್ಷದ ಗಂಡು ಹುಲಿಗೆ ಸ್ವತಃ ಗಾರ್ಡಿಯನ್ ವಿಷ ಪ್ರಶಾನ ಮಾಡಿಸಿ ಸಾಯಿಸಿದ ಘಟನೆ!! ಇದು ಬಹಳ ದುಃಖಕರ ವಿಷಯ. 2 ದಿನ ಉಪವಾಸ ಕೆಡವಿ 3 ನೆ ದಿನ ಆಹಾರದಲ್ಲಿ ವಿಷ ಬೆರೆಸಿ ಹಾಕಿದ್ದ. ಮೊದಲೇ ಹಸಿದಿದ್ದ ಹುಲಿ ಆ ವಿಷದ ಆಹಾರ ಪೂರ್ತಿಯಾಗಿ ತಿಂದು ಮಾರನೆ ದಿನ ಬೆಳಗ್ಗೆ ಸಾವನ್ನು ಅಪ್ಪಿತು. ಇದು ಓದಿದಂದಿನಿಂದ ಜಾಗೃತಿ ಮೂಡಿಸೋಕೆ ತುಂಬ ಪ್ರಯತ್ನ ಮಾಡ್ತಾ ಇದ್ದೀನಿ. ತುಂಬ ಬೇಸರವಾಯ್ತು ಓದಿ. ಸಿ ಯಿ ಓ ಮತ್ತು ಪರಿಚಾರಕನ ನಡುವೆ ಆದ ಯಾವುದೊ ಮಾತಿನ ಚಕಮಕಿ ಇದಕ್ಕೆ ಕಾರಣ. ಅವನು ಮಾಲಿಕನ ಮೇಲಿನ ದ್ವೇಷವನ್ನು ಏನು ಅರಿಯದ ತನ್ನ ಮೇಲೆ ವಿಶ್ವಾಸ ಇರಿಸಿದ ಬಡ ಹುಲಿಯ ಮೇಲೆ ತೀರಿಸಿಕೊಂಡ. ಅವನ ದ್ವೇಷ ಆ ಹುಲಿಯ ಜೀವದೊಂದಿಗೆ ಮುಗಿದು ಹೋಯಿತು. ಬಹಳ ಬೇಸರ ತರುವಘಟನೆ ಇದು.
ಸಕಲ ಜೀವಿಗಳಿಗೂ ದೇವರು ಭೂಮಿ ಮೇಲೆ ಬದುಕೋದಕ್ಕೆ ಹಕ್ಕು ಕೊಟ್ಟಿದ್ದಾನೆ. ಮಾನವ ಭುದ್ದಿ ಜೀವಿ ಅನ್ನಿಸಿಕೊಂಡವನು ತನ್ನ ಸ್ವಾರ್ಥವನ್ನೇ ಯಾವತ್ತು ನೋಡುತ್ತಾನೆ. ಇತರರು ಎಲ್ಲಾದರೂ ಹೋಗಿಕೊಳ್ಳಲಿ ಅದರ ಬಗ್ಗೆ ಚಿಂತೆಯೇ ಇಲ್ಲ! ಓದುಗರೇ, ಇದು ಭಗವಂತನ ಸೂಚನೆ ವಿಶ್ವದ ಕೊನೆ ತಲುಪುತ್ತ ಇದೀವಿ. ಈಗಲೇ ನಾವು ಸರಿಯಾದ ನಿರ್ಧಾರ ಕೈಗೆ ತೆಗೆದುಕೊಳ್ಳಬೇಕು. ನೀರು ತಲೆಯವರೆಗೂ ಬಂದ ನಂತರ ಯೋಚಿಸಿ ಪ್ರಯೋಜನವೇ ಇಲ್ಲ. ಈಗ ೧೪೦೦ ಹುಲಿಗಳು ಉಳಿದಿವೆ. ದಯವಿಟ್ಟು ಫೇಸ್ ಬುಕ್ (www.facebook.com/causes/67061?m=a4f6b3b1) "save tiger" ಸೇರಿ. 2 ಲಕ್ಷ ಜನ ಆಗಬೇಕಿದೆ. ಅಲ್ಲಿ ನಾವು ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ಏನೆಲ್ಲಾ ಯೋಜನೆಗಳನ್ನು ಮಾಡಬೇಕು ಎಲ್ಲವನ್ನು ಚರ್ಚಿಸೋಣ.
ತಮ್ಮ ಬೆಲೆ ಬಾಳುವ ಸಮಯ ಇದಕ್ಕಾಗಿ ಸವೆಸಿದ್ದಕ್ಕೆ ವಂದನೆಗಳು.
Regards,
Aneesh.P
feedback at livewithdrmz.blogspot.com.