time pas chutuku....

 1. ಅಂತರ
   ಪತಿ ರಾತ್ರಿ ತಡ ಬಂದರೆ ಸಾಕು
   ಅವನಿಗೆ ಕಾದಿದೆ ಗಂಡಾಂತರ
   ಕಾರಣ ವಿಶಾಲವಿದೆ ಗಂಡ ಹೆಂಡತಿ ಅಂತರ!!!!

2. ಅಮ್ಮ
   ಇಂದು ಬಂದವಳು/ನು  ಪ್ರೀತಿ ತಂದವಳು/ನು
   ಹೃದಯವನ್ನೇ ಆಕ್ರಮಿಸಿ ತನ್ನ ,
   ಆಗ ಎಲ್ಲವೂ ಚೆನ್ನ....
   ಏಕೆ ಬೆಡವಾಗುತ್ತಲೇ ಹೋಗುತ್ತಾಳೆ
   ಗರ್ಭದಲ್ಲಿಯೇ ಸ್ಥಾನ ಕೊಟ್ಟ ಅಮ್ಮ....?

3. ಗಲ್ಲದಲ್ಲೇ ಎಲ್ಲಾ....!!!
   ನನ್ನಾಕೆಯ  ಗಲ್ಲ
   ಸೇಬಿಗಿಂತ ಕಮ್ಮಿಯೇನೂ ಅಲ್ಲ
   ಆಕೆ ಮುನಿಸಿಕೊಂಡಾಗಲೆಲ್ಲ
   ತವರು ಬಿಟ್ಟು ಬೇರೆ ಮಾತೇ ಇಲ್ಲ.....!!!

4. ಹೃದಯದ ಮಾತು
   ಮಾತಿನಲ್ಲಿ ಹೇಳಲಾರದ  ಮಾತುಗಳು
   ಮನದೊಳಗಿನ ಭಾವಗಳು......
   ನೀ  ಎದುರಿಗೆ ಬಂದಾಗ ತನಿಂತಾನೆ
   ಹೊಮ್ಮಿ ಬರುವ ಹೃದಯದ ಲಹರಿಗಳು.....

5. ಬಂಧನ...!!!
   ಕನಸಾಗಿ ಬಂದ ನೀನು
   ಕನಸಿಗೆ ಹೊಸ ಅರ್ಥ ತಂದಾಗ
   ಹೃದಯದಲ್ಲಾಗಲೇ ಬಂಧಿಸಿದ್ದೆ ನಾನು....!!!

6. ಬಯಸದೆ ಬಂದ ಭಾಗ್ಯ....!!!
  ಬಯಸದೆ ಬಂದ ತಿರುವು
  ಕೊನೆಯಲ್ಲಾದ ಕೌತುಕಗಳ ಭರವು
  ದೇವರ ಹಾರೈಕೆ ಇದೇ ಏನೋ ..?
  ಬಯಸಿದ್ದು ಒಂದಾದರೆ ಕೊಟ್ಟಿದ್ದು ಇನ್ನೇನೋ...!!!

7. ಕಣ್ಣಿದ್ದರೆ ಕನಸು
  ಮನದಲಿ ಹಲವು ಕನಸು ತಂದವಳು
  ಕನಸಿಗೆ ಹೊಸ ಅರ್ಥವೇ ಆದವಳು
  ಆದರೆ ಅಮ್ಮ ಆ ಕನಸು ಕಾಣಲು ಕಣ್ಣಾದವಳು....!!!
  (ಅಮ್ಮನ ಸ್ಪೂರ್ತಿ ಇಲ್ಲದೆ ಕನಸನ್ನ ಕಾಣೋದು ಆದರು ಹೇಗೆ ಹೇಳಿ...??)
  Dedicated 2 all mothers......


8.ಕಳೆದು ಹೋದ ನಾಯಿಮರಿ ನೆನಪಲ್ಲಿ (name:tiger,nickname:tigu,born:12-12-04, death:17-04-10).....
  ಮನಸಿನ ಭಾವನೆಗಳ ನಡುವೆ
  ಪುಟ್ಟ ನೆನಪಿನ ಬಿಂದುವಾಗಿ ಸೇರಿ
  ಇದ್ದಷ್ಟು ದಿನ ಪುಟಿಯುತ್ತಲೇ ಇದ್ದು
  ಹೊರಟೆ ಮನಸಿಗೆ ಭಾರವ ಕೊಟ್ಟು
  ಎಲ್ಲೇ ಇದ್ದರೂ ನಗುತ್ತ ಇರು ಹೋದ ಮೇಲೂ ನಮ್ಮ ಸಂಘವ ಬಿಟ್ಟು.....:(

9. ಸರಕಾರ-ಸಂಸಾರ 

  ಸರಕಾರದ ಅತಂತ್ರ ಸ್ಥಿತಿಯಂತೆ
  ಸಂಸಾರ ಸಾಗಿದಾಗ
  ಮಿಶ್ರ ಸರಕಾರದಲ್ಲಿ ಭಿನ್ನ ಮತ ಅಲ್ಲದೆ
  ಸಹಮತ ಬರದಾಗ.....!
  ಕುರ್ಚಿ ಉಳಿಸಿಕೊಳ್ಳಲು ಹೆಣಗುವಂತೆ ಸ್ಥಿತಿ ಇದ್ದಾಗ,
  ನಮ್ಮ ಪ್ರತಿಷ್ಟೆಗಾಗಿ ಸ್ಥಾನ ಉಳಿಸಿಕೊಳ್ಳುವುದೇ
  ಜೀವನದಲ್ಲಿ ಪ್ರೀತಿಯೆಂದರೇನು ಎಂದು ಕಾಣದಿದ್ದಾಗ....!!!



10 comments:

  1. oooooooooooooooooooo hmmmmmmmmmmmm hmmmmmm aneeshakavigalu.... chutukotsava chanaagide maaraya
    :) :)

    ReplyDelete
  2. @Tejaswini thank u thank u.....tham prothsaha ella beku....

    ReplyDelete
  3. ಕವನಗಳು ಬಹಳ ಚೆನ್ನಾಗಿವೆ... ಹೀಗೆ ಬರೆಯುತ್ತಿರು..

    ReplyDelete
  4. @Naveen...ಹಳ್ಳಿ ಹುಡುಗ thank u sir.....

    ReplyDelete
  5. maga, naayi mari sath hoyta athva kaLedu hoyta? kaLedu hogidre, please maga, death anta date kottidyalla adna change maaDo...that was my favorite kavana by the way :)

    ReplyDelete
  6. @Puneeth itz no more maga.... upset at dat time...Alwez it was followin me til road wer school bus comes...and it was identifyin my voice wenever i cal 2 home....itz just very cute and nice pet...v r losers.....:(

    ReplyDelete
  7. hmmmm...RIP...what was its name maga?

    ReplyDelete
  8. @Puneeth its name tiger...nickname tigu....

    ReplyDelete