ಹನಿಯಾದ ಕತೆಗಳು......

(ಹಲವು ಪುಟಗಳ ಕತೆಯ ಬದಲು ಈ ಸಣ್ಣ ಹನಿಯಲ್ಲಿ ಹಲವು ಭಾವನೆಗಳನ್ನು ತರುವ ಪ್ರಯತ್ನ. ಓದಿದ ನಂತರ ಈ ಪುಟ್ಟ ಕತೆಗಳು ಮನದಲ್ಲಿ ಎಲ್ಲೋ ಮುಚ್ಚಿರುವ ನೂರಾರು ಸಾಲುಗಳನ್ನು ಹುಟ್ಟು ಹಾಕಿದರೆ ಅದೇ ಒಂದು ದೊಡ್ಡ ಸಂತಸ )

ಮಿತಿಯಿಲ್ಲದ ಮಾತೃ ವಾತ್ಸಲ್ಯ...... 


ಬೆಳಗಿನ ತಿಂಡಿ ಸಮಯ.
ಪುಟ್ಟ ಮಗು ತನ್ನ ಅಪ್ಪನ ಜೊತೆ ಸೋಫಾದಲ್ಲಿ ಕೂತಿದೆ. ಇಬ್ಬರ ಕೈಯಲ್ಲೂ ತಿಂಡಿ ತಿನ್ನುವ ತಟ್ಟೆ...!! ಅಮ್ಮ ಅಡುಗೆ ಮನೆಯಲ್ಲಿ ದೋಸೆ ಎರೆಯೋ ಸದ್ದು. ಒಬ್ಬರಾದ ಮೇಲೆ ಒಬ್ಬರಿಗೆ ಎಂಬಂತೆ ಅಡಿಗೆ ಮನೆಯಿಂದ ದೋಸೆ ತಂದು ಬಡಿಸುತ್ತ ಇದ್ದಾಳೆ ಅಮ್ಮ . ಮೌನ ಮುರಿಯೋಣ ಎಂಬಂತೆ ಪಾಪು ತಂದೆಗೆ ಕೇಳಿತು,  "ಅಪ್ಪಾ .... ಇಷ್ಟು ಒಳ್ಳೆ ಅಮ್ಮ ನಿಂಗೆ ಎಲ್ಲಿ ಸಿಕ್ಕಿದ್ಳು........???"





   











ಮಗುವಿನಿಂದ ಇಂತದ್ದೊಂದು ಪ್ರಶ್ನೆ ನಿರೀಕ್ಷಿಸದ ತಂದೆ ಕೆಮ್ಮು ಬಂದಂತಾಗಿ ಹಿಂಬದಿ ತಲೆ ಹೊಡೆದುಕೊಂಡ......!! "ಅದೇನೋ ಮಗು ಕೇಳ್ತಿದೆಯಲ್ಲ, ಹೇಳಿ... " ಎಂದಷ್ಟೇ ಹೇಳಿ ಮಗುವಿನ ಅಮ್ಮ ಅಡಿಗೆ ಮನೆ ಸೇರಿದಳು. ಅಪ್ಪ ಹೇಳಲು ಮುಂದಾದನು. ಕಂದಾ, ೫ ವರ್ಷದ ಹಿಂದೆ ಆಫೀಸಲ್ಲಿ ಎಂದಿನಂತೆ ಕೆಲಸದಲ್ಲಿ ಇದ್ದಾಗ ಬಂದ  ಒಂದು ಕರೆ. "Hiii sir, Good Morning.... This is Anvita from Citibank. You want credit card  sir?...." ಎಂದಾಗ ನನಗೂ  ಅರಿವಿರಲಿಲ್ಲ ಅವಳೇ ಮುಂದೆ ನಿನ್ನ ಅಮ್ಮ ಆಗ್ತಾಳೆ ಅಂತಾ...!!! ಕೆಲಸದ ಒತ್ತಡದಲ್ಲಿ related documents ಕೊಡಲು ಮರೆತಾಗ ಅವಳಿಂದ ಹಲವು ಕರೆ, reminders. ಮಧ್ಯೆ ಎಲ್ಲೋ ಕಳೆದು ಹೋದ್ವಿ ಇಬ್ಬರೂ.... ನಿನಗೆ ಅಮ್ಮನಾಗಿ ಅವಳು ಬಂದಿದ್ದು ಹೀಗೆ.  ಎಂದು ಹೇಳಿ ಮುಗಿಸಿದ ತಂದೆ , ಮಗುಗೆ ಏನು ಅರ್ಥ ಆಯ್ತೋ ಗೊತ್ತಿಲ್ಲ ಅಂತ ಮನದಲ್ಲೇ ಅಂದುಕೊಂಡ!

  ಆದರೆ ಮಗುವಿನ ಮುಗ್ಧ ಮಾತು ತಂದೆಯ ಕಣ್ಣುಗಳನ್ನು ತೇವವಾಗಿಸಿತು.  ಪಾಪು ಹೇಳ್ತು ," ಅಪ್ಪ.... ಕ್ರೆಡಿಟ್ ಕಾರ್ಡ್ ಏನೋ ಲಿಮಿಟ್ ಇರತ್ತೆ, ಏನಾದ್ರು ತಗೊಳ್ಳೋಣ ಅಂದ್ರೆ ಲಿಮಿಟ್ ಮುಗೀತು ಅಂತ ಹೇಳ್ತಾ ಇರ್ತ್ಯ.... !!! ಆದ್ರೆ ಕ್ರೆಡಿಟ್ ಕಾರ್ಡ್ ಹೇಳಿದ ಅಮ್ಮ!!! ಲಿಮಿಟ್ ಇಲ್ಲದಷ್ಟು ಪ್ರೀತಿ ಕೊಡ್ತಿರ್ತಾಳೆ....... "ಮಗುವಿನ ಗಂಟಲು ಕಟ್ಟಿದ ತೊದಲು ಮಾತಿಗೆ ಉಕ್ಕಿಬಂದ ಹೆಮ್ಮೆಯ ಭಾಷ್ಪದಿಂದ ಅಡುಗೆ ಕೋಣೆಯಲ್ಲಿ ಏನೂ ಅರಿವಿಲ್ಲದಂತೆ ಪಾತ್ರೆ ತೊಳೆಯುತ್ತಾ ನಿಂತಿದ್ದ ಮನದನ್ನೆಯನ್ನೊಮ್ಮೆ ನೋಡಿದ.


ಇದ್ದುದರಲ್ಲೇ ಬಂತು ತೃಪ್ತಿ


Audi ಕಾರಲ್ಲಿ ಒಂದಷ್ಟು ದೂರ ಸಾಗಿದ ಒಬ್ಬ ವ್ಯಕ್ತಿ ಬಾಯಾರಿದಂತಾಗಿ ಕಾರನ್ನು ಅಲ್ಲೇ ಪಕ್ಕದಲ್ಲಿ ನಿಲ್ಲಿಸಿ ರಸ್ತೆಯ ಬದಿಯಲ್ಲೇ ಕೆಳಗಡೆ ಇಳಿದ.  ಬಾವಿ,ಕೆರೆಯೋ ಕಾಣಬಹುದೇನೋ ಎಂಬ ಬಯಕೆಯಿಂದ!
    ಒಬ್ಬಳು ಮಹಿಳೆ ಬಾವಿಯಿಂದ ನೀರು ಎಳೆಯೋದನ್ನ  ಕಂಡ. ಬಳಿ  ಹೋಗಿ  ಅಮ್ಮ , ವಿಪರೀತ ದಾಹ ಎಂದ... ಸಂತಾನವೇ ಕಾಣದ ಮನಕ್ಕೆ ಆ ಅಮ್ಮಾ ಎಂಬ ಒಂದೇ ಒಂದು ಪದ ಸಾಕಿತ್ತು. ಮಮತೆಯಿಂದ ಮನ ತುಂಬಿ ನೀರೆರೆದಳು. ಮತ್ತೆ ಮನೆಮಂದಿಯ ದಣಿಯುವಿಕೆಯ ಶಮನಕ್ಕಾಗಿ ಇನ್ನೊಂದು ಕೊಡ ನೀರು ಸೇದಲು ಮುಂದಾದಳು.
   ಮಳೆಗಾಲದಲ್ಲಿ ಜೀವನ ಮಾಡಲು ಕಷ್ಟವೆಂಬಂತ ಸೂರಿನಡಿ ಆ ಮಹಿಳೆಯ ಸಂಸಾರ.  ಇಬ್ಬರ ಬದುಕಿನ ಸ್ಥಿತಿ,ಶೈಲಿಗಳು ಬೇರೆ ಬೇರೆಯದಾಗಿದ್ದರು ಕೂಡ  ಆ ಸಂಧರ್ಭದಲ್ಲಿ  ಇಬ್ಬರ ಮೂಲ ಅವಶ್ಯಕತೆಯೂ ಒಂದೇ ಆಗಿತ್ತು....... , ಅದು  "ನೀರು .... !!"

















ದೇವನಿಗೆ ಅನ್ನಿಸಿದ್ದು ..... !!!


Bolero ಕಾರೊಂದು ದೇವಾಲಯದ ಎದುರು ಬಂದು ನಿತ್ತಿತು.  ಅದರಿಂದ ಇಳಿದ ಶ್ರೀಮಂತ ವ್ಯಕ್ತಿಯೊಬ್ಬ ದೇವರ ದರ್ಶನಕ್ಕಾಗಿ ಮುನ್ನುಗ್ಗಿದ.  ಇದನ್ನು ಗಮನಿಸುತ್ತಿದ್ದ ಬಡ ಹೂ ಮಾರೋ ವ್ಯಕ್ತಿಯೊಬ್ಬ ದೇವರ ಅರ್ಚನೆಗೆ ಸ್ವಲ್ಪ ಹೂವನ್ನ ಕೊಂಡು ತನ್ನ ಜೀವನಕ್ಕೂ ಸ್ವಲ್ಪ ಸಹಾಯವಾದಂತೆ ಆದೀತು ಎಂದ. ಸಿಡುಕು ಮುಖದ ಆ ಧನಿಕ "ನಿನ್ನ ಬಳಿ ಏನು ಮಾತು, irritating fool.... " ಅಂತ ಗೊಣಗಿಕೊಂಡು ದೇವಾಲಯದ ಒಳಗೆ ನಡೆದ.  ದೇವರ ಗುಡಿಯಲ್ಲಿನ ಮೂರ್ತಿಗೆ ಕೈ ಮುಗಿದು ಎಲ್ಲರಿಗು ಕಾಣುವಂತೆ ನೂರರ 3 ನೋಟುಗಳನ್ನ ತೆಗೆದು ಕಾಣಿಕೆ ಹುಂಡಿಗೆ ಹಾಕಿದ. ..!!!
   "ಮಾನವ ಸ್ಥಾನಕ್ಕೆ ಕೊಡುವಷ್ಟು ಗೌರವ, ವ್ಯಕ್ತಿಗೆ ಕೊಡೋದಿಲ್ಲ. ತಾನು ಗುಡಿಯೊಳಗೆ ಮೂರ್ತಿಯಾಗಿದ್ದರೆ ಸಿಗುವ ಬೆಲೆ ಗುಡಿಯ ಹೊರಗಡೆ ಬೇರೆ ರೂಪದಲ್ಲಿದ್ದರೆ ಸಿಗಲಾರದು... " ಎಂದುಕೊಂಡಿತು ಗುಡಿಯೊಳಗಿನ ಮೂರ್ತಿ  ಮನದಲ್ಲೇ....

          

1 comment: