Ondastu thunthuru hanigalu

ಸುಖೀ ಸಂಸಾರ
-------------------------------------------
ಮನಸ್ಸಿನ ಒಂದಷ್ಟು ಭಾವನೆಗಳಿಗೆ,
ಬಣ್ಣ ಕೊಡಲೆಂದು ಬಂದೆ ಬಾಳಿಗೆ.... 
ಸಿಹಿ ಕನಸು ಕಂಡ ಕಣ್ಣುಗಳಿಗೆ
ರೆಪ್ಪೆಯಾದೆ ಮೆಲ್ಲಗೆ. 
ಕಣ್ಣನ್ನು ಕಾಪಾಡೋ ಅಕ್ಕರೆಯ ನೆಪದಲ್ಲಿ ಹಾಗೆಯೇ....
ಆಗಾಗ ರೆಪ್ಪೆಯಿಂದ  ಮುಚ್ಚಿ
ನಿದ್ದೆಗೆ ಜಾರುವಂತೆ ಮಾಡಿದೆ....!! 

ಹೃದಯದ ಹಲವು ಬಯಕೆಗಳಿಗೆ,
ಆಸರೆಯಾಗುವ ಬಾಳಿನ ತೋಟವಾದೆ........ 
ಅದರಲ್ಲಿ ತುಂಬಿರುವ ಹಲವು ಚಿಗುರುಗಳಿಗೆ 
ಅದರ  ಸುತ್ತ ಪ್ರೀತಿಯ ಬಂಧನದ ಕೋಟೆಯಾದೆ
ಆ ಪುಟ್ಟ ತೋಟದಲ್ಲಿ ಅರಳಿರುವ ಹೂ ,ಫಲಗಳು ಅದೆಷ್ಟೋ.... 
ಎಲ್ಲವನ್ನೂ ಸಮನಾಗಿ ಹಂಚಿಕೊಂಡಾಗ  ಬಾಳ ವನದಲ್ಲಿ,
ಪ್ರೀತಿ ,ಸಂಭ್ರಮದ  ಕಳೆ ಮತ್ತಷ್ಟು  ಹೆಚ್ಚಾಗದೆ ...???


ಕರುಣೆಯ ಕಡಲು 
----------------------------
ಬಾಲ್ಯದಲ್ಲಿ ಮಾತಿನ್ನೂ ಕಲಿಯದ  ಮಗುವಾಗಿದ್ದಾಗ 
ಮಾತದವಳು ಅವಳು.......... 
ಆಟ ಪಾಟಗಳಿಗೆ, ಹಸಿವಿಗೆ, ಸಣ್ಣ ಪುಟ್ಟ ಬಯಕೆಗಳಿಗೆ   
ಅವಳೇ ಮಾತಾಗಿ ಬೇಕು ಬೇಡಗಳನ್ನು ಕೊಟ್ಟ ತಾಯಿಯವಳು.............
ಗರ್ಭದೊಳಗಿಂದ ಜತೆಯಲ್ಲೇ ಇರೋವಾಗ ,
ತನ್ನ ಮಗುವನ್ನು ಇನ್ನೂ ನೋಡದೆಯೇ ಅಷ್ಟೊಂದು ಪ್ರೀತಿಸಿದವಳು........   


ಮಾತೇ ಇಲ್ಲದ ತನ್ನ ತೊದಲು ಭಾಷೆಯ ಪ್ರಪಂಚದಲ್ಲಿದ್ದಾಗ
ಅಲ್ಲಿಂದ ಹಿಡಿದ ಸಣ್ಣ ಪುಟ್ಟ ಹಟಗಳು, ಬಯಕೆಗಳು,
ಅಮ್ಮ ಬಲ್ಲಳು, ಅದು ಮಗುವಿನ ಯಾವ ಭಾಷೆಯಾಗಿದ್ದರೂ,
ಇತರರಿಗೆ ಅರ್ಥವಾಗದಿದ್ದರೂ ತಾನು ತಿಳಿದುಕೊಂಡವಳು ...............     
ಜಗನ್ಮಾತೆ ಎಲ್ಲರಿಗು ಸಮವಾಗಿ ಮಾತೃ ವಾತ್ಸಲ್ಯ, ಮಮತೆ ಹಂಚಲು ,
ತನ್ನ ಅವತಾರವಾಗಿ ತಾನೇ ಆ ಪ್ರತಿ ರೂಪವಾಗಿ ಬಂದವಳು .................. !!!!

(ಎಲ್ಲಾ ಅಮ್ಮಂದಿರಿಗೆ ಪ್ರೀತಿಯಿಂದ....................... )    


   


ನಿಜ  ಜೀವನ
-----------------------------------------------------
ನಾವಂದಂತೆ ಸಾಗುವಂತಿದ್ದರೆ ಬಾಳು,
ಮನಸಲ್ಲಿ ಉಳಿಯೋದೇ ಇಲ್ಲ ಕೌತುಕ,ಸಂದರ್ಭ ಎದುರಿಸೋ ಸವಾಲು.
ಹೇಗೆ ಗುಲಾಬಿಗಳ ಜತೆ ಇರುವುದೋ ಮುಳ್ಳಿನ ಸಾಲು,
ಹಾಗೆ ಜೀವನವೆಂಬ ಕಡಲಲ್ಲಿ,
ಇರಲೇಬೇಕು ಸಿಹಿಕಹಿ ಸಮಪಾಲು.....
ತಿಳಿದಾಗ ಬೆಳಕು,ಮೋಡಗಳು ತುಂಬಿದ ಬಾಳನೌಕೆ ಮುನ್ನಡೆಸಲು,
ಯುಗಾದಿ ಆಚರಿಸುವುದು ಮನಸ್ಸಿನಲ್ಲಿ ಇರೋ ಹಲವು ಭಾವನೆಗಳ ಪುಟಗಳು........         



ಕನಸಿಗೆ ಬೆಲೆ
----------------------------------------------------
ಭೂಮಿಯ ಮಡಿಲಿಗೆ ಮಂಜಿನ ಹನಿ ಬಿದ್ದಂತೆ,
ತಂಪಾದ ಹನಿಗಳಿಗೆ ಕಾದಿದೆ ನೊಂದ ಮನ.......
ಬಿಸಿಲಿನ ಪ್ರಭೆ ಹೆಚ್ಚಿದಾಗ  ಮನ ಮಳೆ ಬಯಸಿದಂತೆ,                                     
ಬರಲಾರದೆ ಹೃದಯದ ಹಲವು ಹುದುಗಿದ ಕನಸಿಗೆ ನೀರೆರೆವ,
ಸ್ನೇಹಕ್ಕೆ  ಪೋಷಣೆ ಸಿಗುವ ಒಂದೊಳ್ಳೆಯ ದಿನ............   !!!




ಆಗಲೇ ಬೇಕಿತ್ತು ಗೆಳೆತನ 
------------------------------------------------------------------------
ಮನಸು ಬಯಸಿದಾಗಲೂ ಸಿಗದಿದ್ದ,
ಅಂತದ್ದೊಂದು ಗೆಳೆತನದ ಒಲವು,
ತುಂಬಾ ಅಗತ್ಯವಾಗಿತ್ತೇನೋ  ಈ ಮೊದಲೇ ಆ ಸ್ನೇಹ ದೊರಕಿದ್ದರೆ
ಎಂಬಂತೆ ಭಾಸವಾಗುತ್ತದೆ ತಡವಾಗಿ ಆದ ಪರಿಚಯವು. 
ಮುತ್ತಿನಂತೆ ಸ್ನೇಹವು  ಹಬ್ಬಿಕೊಂಡಷ್ಟು,
ಮನಸ್ಸಿನ  ಕಣ್ಣೊಳಗೆ ಹಿಡಿದಿಟ್ಟ ಭಾವನೆಗಳು ಇದ್ದಕಿದ್ದಂತೆ ಕಣ್ತುಂಬಿ ಬರುವವು,
ಇಂತ ಬೆಲೆಕಟ್ಟಲಾಗದ ಮುತ್ತು ಸಿಗಬಾರದಿತ್ತೆ ಇನ್ನೂ ಮೊದಲು ಎನ್ನುವಷ್ಟು ... !!!


ಸ್ನೇಹವು ಬರೆದಿದ್ದರೆ ಭಗವಂತನ ಲೇಖನಿಯಿಂದ,
ಆ ವ್ಯಕ್ತಿಗಳು ಸ್ನೇಹಿತರಾಗುವರು ಎಲ್ಲೇ ಇದ್ದರೂ ಯಾವ ಮೂಲೆಯಿಂದ.....
ನಾವೇ ಇಂತಹ ಗೆಳೆತನಕ್ಕೆ ಹುಡುಕುತ್ತಿದ್ದೆವೇನೋ ಎಂದನಿಸುವಂತೆ,
ಸಮಯ ಬಂದಾಗ ದೇವನೇ ಕಲಿಸುವನು,
 ಅವನು ನಮಗಾಗಿ ಬರೆದ ಪುಟದಿಂದ ...!!!

(Dedicated to best friend....)

                   
     


            

1 comment: