Wednesday, November 24, 2010

ಸಂಸ್ಕೃತಿಗೆ ಮೆರುಗು ಕೊಟ್ಟ ಕಲ್ಲುಗುಂಡಿ(ಸಂಪಾಜೆ) ಯಕ್ಷ ಉತ್ಸವ......




ದೀಪಾವಳಿಯ ಸಮಯ ಬಂತೆಂದರೆ ಸಾಕು ಯಕ್ಷಗಾನ ಪ್ರಿಯರಿಗೆ ಸಂತಸದ ಕ್ಷಣಗಳು. ಸಂಪಾಜೆ(Near ಸುಳ್ಯ taluk) ಯಲ್ಲಿ ನಮ್ಮ ಕರ್ನಾಟಕದ ಕಲೆಗೆ ಬೆಳಕು ಹರಿಸೋ
ಸಮಯ. ಕೀಲಾರು ಗೋಪಾಲಕೃಷ್ಣಯ್ಯ ಇವರ ಸ್ಮರಣಾರ್ಥ ನಡೆಯುವ ಉತ್ಸವ 20 ವರ್ಷದಿಂದ ಹಲವು ಮೇಳಗಳ ಕೂಡುವಿಕೆಯೊಂದಿಗೆ ನಿಯೋಜಿಸಲ್ಪಡುತ್ತದೆ. ಬೇರೆ ಬೇರೆ ವ್ಯವಸ್ಥೆಗಳು , ಕಲಿಯುವ ಆರ್ಥಿಕವಾಗಿ ಹಿನ್ನಡೆಥ ಹೊಂದಿರುವವರಿಗಾಗಿ scholarship, ಪಾನಿಯಗಳು,ಊಟ ಎಲ್ಲ ಅಚ್ಚುಕಟ್ಟಾಗಿ ಏರ್ಪಡಿಸಲಾಗುತ್ತದೆ . ಬೇರೆ ಯಾವುವೂ ಇಲ್ಲ ಅಂದರೂ ದೊಡ್ಡ ವಿಷಯವೇನಲ್ಲ , ಆದರೆ ನಮ್ಮ ನಶಿಸಿ ಹೋಗುತ್ತಿರುವ ಕಲೆಗೆ ಬೆನ್ನೆಲುಬಾಗಿ ನಿಲ್ಲುವುದು ಕೂಡ ಒಂದು ಮೆಚ್ಚುಗೆಯ ಸಂಗತಿಯೇ.
ಹೇಗೆ ಬೇರೆ ಬೇರೆ ರಾಜ್ಯ ,ದೇಶಗಳಲ್ಲಿ ತಮ್ಮ ತಮ್ಮ ಆಚಾರ ವಿಚಾರಗಳ ಪ್ರದರ್ಶನ , ತರಬೇತಿ ಕೇಂದ್ರಗಳು ನಡೆಯುತ್ತಿವೆಯೋ ಹಾಗೆ ನಾವು ಕೂಡ ಈ ನಮ್ಮ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಬೇಕಾಗಿದೆ .ನಮ್ಮ ಇನ್ನೊಂದು ದುರ್ಗಥಿಯೆಂದರೆ ಮುಖ್ಯವಾಗಿ ಕಳಕ್ಕೊಂಡಿದ್ದು G.R.ಕಾಳಿಂಗ ನಾವುಡರನ್ನು. ಅವರು ಬಹುಶಃ ಸಣ್ಣ ವಯಸ್ಸಲ್ಲಿ ಹೋಗಿರದೆ ಇರುತ್ತಿದ್ದರೆ ಯಕ್ಷರಂಗ ಈ ಮತ್ತಕೆ ಬರುತ್ತಿರಲಿಲ್ಲವೋ ಏನೋ . ಯುವಕ ,ಯುವತಿಯರನ್ನು ಕೂಡಾ ಯಕ್ಷಗಾನದತ್ತ ಕೈ ಬೀಸಿ ಕರೆಯುವಂತೆ ಮಾಡುವ ಪ್ರಾಬಲ್ಯತೆ ಇತ್ತು , ಅಂತ ಶಕ್ತಿ ಇತ್ತು ಅವರಲ್ಲಿ , ಹೊಸ ಹೊಸ ವರ್ತಮಾನದ ಜನರಿಗೆ ಇಷ್ಟವಾಗುವಂಥ ಕಥೆಗಳು , ಸಂದರ್ಭಗಳ ಹೆಣೆಯೋದರ ಮೂಲಕ.
ಆದರು ಇಂಥ ಯಕ್ಷ ಉತ್ಸವಗಳು ವರ್ಷಂಪ್ರತಿ ನಡೆಯೋ ಥರ ಎಲ್ಲರು ಕೂಡಿ ಸಹಕರಿಸಿದರೆ ಕಲೆಯ ಅಭಿವೃದ್ದಿ ಆಗಿ ಹೊರ ಊರಿಗೂ ಹರಡೋದರಲ್ಲಿ ಸಂಶಯವೇ ಇಲ್ಲ . ಯಾಕೆ ಹೇಳುತ್ತಿದ್ದೇನೆ ಅಂದ್ರೆ ಮೊನ್ನೆ ಬೇಡರ ಕಣ್ಣಪ್ಪ , ಸುಧನ್ವಾರ್ಜುನ , ವಿಶ್ವಾಮಿತ್ರ ಪ್ರತಾಪ , ಜ್ವಾಲ ಜಾಹ್ನವಿ , ಮಹಿಶೋತ್ಪತ್ತಿ ಇಂಥಹ ಅತ್ಯಮೂಲ್ಯ ಪ್ರಸಂಗಗಳು ನಡೆಯಿತ್ತಿದ್ದಾಗ ಸೇರಿದ್ದವರೆಲ್ಲ ಇಂದಿನ ಯುವಕ, ಯುವತಿಯರು ಅದೂ ಹೆಚ್ಚಿನ ಸಂಖ್ಯೆಯಲ್ಲಿ !!!
ಮಾತಿಗೆ ಎಲ್ಲ ಹೇಳ್ತಾರೆ ಇಂದಿನ ಜನಾಂಗಕ್ಕೆ ಇದೆಲ್ಲ ಇಷ್ಟ ಆಗಲ್ಲ ಅಂತ, ಆದರೆ ಅವರಿಗೆ ಇಷ್ಟ ಆಗಬೇಕು ಅಂದ್ರೆ ಉಣ ಬಡಿಸೋಕೆ ಯಾರಾದ್ರೂ ಮುಂದೆ ಬರಬೇಕು ಅಲ್ವಾ?? ಆಗ ತನ್ನಿಂದತಾನೆ ರುಚಿ ಹಿಡಿದು ಇದರತ್ತ ಬರುವವರ ಸಂಖ್ಯೆ ಜಾಸ್ತಿಯಾಗುತ್ತದೆ. ಕಲೆ ಉಳಿಸಿ , ಬೆಳೆಸಿ .
ಹರೇ ರಾಮ್ . ಯಕ್ಷಗಾನಂ ಗೆಲ್ಗೆ .

3 comments:

  1. Cool man...Yakshini belagu baa...Ninnodhigidhe yuva pade...

    ReplyDelete
  2. hmmm ya youths r rite team 2 save our culture, traditions... Ramasene antha savira team barbeku idella agbekadre....waiting for dat...:-)

    ReplyDelete