ಹಾಲು ಜೇನಿನ ಸಮಾಗಮ
----------------------------------------------
ಅನುರಾಗದ ಅಲೆಯಲ್ಲಿ ಮುಳುಗೋ ಮುನ್ನ ,
ಭಾವನೆಗಳ ಹಂಚಿಕೊಂಡರೆ ಚೆನ್ನ............
ಪರರ ಮಾತು ಕೇಳಿ ಅನುಮಾನಿಸೋ ಮುನ್ನ ,
ಒಂದೇ ಜೀವದಂತಿರೋ ಸಂಗಾತಿಯ ಬಳಿ ತೆರೆದಿಡಿ
ಮನಸಿನ ಎಲ್ಲಾ ಮಾತುಗಳನ್ನ,
ಸೇತುವೆ ಭಧ್ರವಾಗಿದ್ದಸ್ಟೂ ಮುರಿಯದು ಎರಡು ದಡಗಳ ಮಧ್ಯೆ ಸಂಪರ್ಕವನ್ನ
ಹೀಗಾದಾಗ ಬಾಳು ಎಂದೆಂದೂ ಬೆಲೆ ಕಟ್ಟಲಾಗದ ಚಿನ್ನ ..... ||
ಮನಸ್ಸೆಂಬ ಉದ್ಯಾನ
---------------------------------------------------
ಹೃದಯದಲಿ ಅಡವಿಟ್ಟ ಪುಟ್ಟ ಕನಸುಗಳು,
ಬಿಚ್ಚಿಡಲು ಹಾತೊರೆಯುವ ನೂರು ಆಸೆಗಳು............
ಬರಬೇಕಿದೆ ತಂಪೆರೆವ ಮಳೆಯ ಹನಿಗಳು
ಬಾಡಲು ಶುರುವಾದ ಈ ಮನವೆಂಬ ಉದ್ಯಾನದಿ,
ಅರಳದೆ ಇರವು ಬಂಗಾರದ ಹೂಗಳು...........||||
Awesome facts
ReplyDeletegood ones...
ReplyDelete