Saturday, February 16, 2013

ಅಟ್ಟಹಾಸ.... ಮತ್ತೆ ವೀರಪ್ಪನ್ ಯುಗದತ್ತ ....!!!



ನೈಜ ಘಟನೆ ಚಿತ್ರರೂಪದಲ್ಲಿ ಪ್ರೇಕ್ಷಕರಿಗೆ ಇಷ್ಟ ಆಗುವ ರೀತಿಯಲ್ಲಿ ತೋರಿಸುವುದಿದ್ದರೆ ಆ ಯಶಸ್ವೀ ನಿರ್ದೇಶಕರಲ್ಲಿ ಒಬ್ಬರಂತು  ಎಂ.ಎಸ್  ರಮೇಶ್ ...... ಈ ಮೊದಲು ಬಂದಿದ್ದ "ಸಯನೈಡ್ " ಚಿತ್ರವು ಅಷ್ಟೇ ಪರಿಣಾಮಕಾರಿಯಾಗಿ ಬಿಂಬಿಸಿದವರು. ಅದನ್ನೇ ಮನಸ್ಸಲ್ಲಿಟ್ಟುಕೊಂಡು  ಈಗ ಬಂದ "ಅಟ್ಟಹಾಸ " ಸಿನೆಮಾಗೂ ಹೋಗೋಣ ಎಂದು ನಿರ್ಧರಿಸಿ ಉತ್ಸಾಹದಿಂದ ಹೊರಟೆ ಕಾರಣ ಇದೂ ಕೂಡ ಒಂದಷ್ಟು ದಶಕಗಳ  ಕಾಲ 3  ರಾಜ್ಯಗಳಲ್ಲಿ ಭೀತಿ ಹುಟ್ಟಿಸಿದ್ದ ದಂತಚೋರ  ವೀರಪ್ಪನ್ ಕುರಿತಾದ್ದರಿಂದ.



ನಂಬಿಕೆಗೆ ನಿರಾಸೆ ಮಾಡದೆ , ಪ್ರೇಕ್ಷಕನ ಕುತೂಹಲಗಳಿಗೆ ಹಲವು ಮಾಹಿತಿಗಳು ಚಿತ್ರದಲ್ಲಂತು ಇದ್ದೇ ಇವೆ.  ಸಾಮಾನ್ಯವಾಗಿ ಗೊತ್ತೇ ಇರೊ ಕತೆ ಅಂದುಕೊಂಡು ನೋಡಲು ಬಂದರೂ ಹಲವು ವಿಷಯಗಳು, ಕೆಲವೊಂದು ಘಟನೆಗಳ ಕುತುಹಲಭರಿತ ಮಾಹಿತಿಗಳು ನಿಮಗೆ ಸಿಗೋದರಲ್ಲಿ ಸಂದೇಹ ಬೇಡ. ನೈಜ ಘಟನೆ ಆದರಿಸಿ ಮಾಡಿದ ಚಿತ್ರವಾದ್ದರಿಂದ, ನೋಡಲು ಬರೋ ಜನರ ಕುತೂಹಲಕ್ಕೆ ನಿರಾಸೆ ಆಗಬಾರದೆಂಬ ಉದ್ದೇಶ ಇಟ್ಟುಕೊಂಡು ನಿರ್ದೇಶಕರು ಒಂದು ಸವಾಲಿನಂತೆ ಅದನ್ನು ಸ್ವೀಕರಿಸಿ ಚಿತ್ರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರಕ್ಕೆ ಜೀವಾಳವೇ ಆದವರು ಕಿಶೋರ್. ಪಾತ್ರಕ್ಕೆ ಹೇಳಿ ಮಾಡಿಸಿದಂತೆ ತೋರುತ್ತಾರೆ. ವೀರಪ್ಪನ್ ಗೆ ಜೀವ ತುಂಬಿ ಅಭಿನಯಿಸಿದ್ದಾರೆ. ವೀರಪ್ಪನ್ ಮತ್ತೆ ಬಂದನೇನೋ ಅನ್ನುವಸ್ಟು ಹೊಂದಾಣಿಕೆಯಾಗಿದೆ ಆ ಪಾತ್ರ ಅವರಿಗೆ. ಎಲ್ಲ ದೃಶ್ಯದಲ್ಲೂ ವೀರಪ್ಪನ್ ಹೋಲಿಕೆ  ಅವರಿಗಿದೆ. ಅವರ ಪ್ರತಿಭೆ ಇಲ್ಲಿ ಎದ್ದು ಕಾಣುವುದಂತು ಸತ್ಯ.







ಕಾಡುಗಳ್ಳ ನೊಂದಿಗಿನ ಹೋರಾಟದಲ್ಲಿ ಮಡಿದ ಪೋಲೀಸರೆಸ್ಟೋ. ನರಹಂತಕನ ಮಟ್ಟಹಾಕಲು ಪೊಲೀಸರು ನಡೆಸುವ ಒಂದೊಂದು ರಹಸ್ಯ ಕಾರ್ಯಾಚರಣೆ, ಯೋಜನೆ ಎಲ್ಲವೂ ಪ್ರೇಕ್ಷಕನ ಕುತೂಹಲಕ್ಕೆ ಸರಿಯಾದ ಮಾಹಿತಿ ಒದಗಿಸಿವೆ. ಇದು ಒಬ್ಬ ಕ್ರಿಮಿನಲ್ ಕತೆಯಾದರೂ ಎಲ್ಲೂ ಅಸಭ್ಯ ಮಾತುಗಳ ಬಳಕೆಯಾಗಿಲ್ಲ,ಅನಾವಶ್ಯಕ ಎಳೆತವಿಲ್ಲ. ಎಲ್ಲದರ ಬಗ್ಗೆಯೂ ಚಿತ್ರ ತಂಡ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದೆ. ಕ್ಯಾಮೆರಾ ವರ್ಕ್  ಕೂಡ ಇಲ್ಲಿ  ವರ್ಣಿಸಲೇ ಬೇಕು.  ಇಂತ ಒಂದು ನೈಜ ಘಟನೆ ಆದಾರಿತ  ಚಿತ್ರ ಇತ್ತೀಚಿನ ಸಿನಿಮಾಗಳಿಗೆ ಹೋಲಿಸಿದರೆ  ಒಂದು  ಬದಲಾವಣೆ ಕೊಡುವುದಂತೂ ಸತ್ಯ.  ಇಂತ ಸಿನೆಮಾಗಳ ಪ್ರಯತ್ನ ಆದಾಗ ಪ್ರೊತ್ಸಾಹಿಸಲು ಹಾಗೂ ಒಂದು ಒಳ್ಳೆಯ ಚಿತ್ರ ಬಹಳ ದಿನಗಳ  ಮೇಲೆ ಬಂದಿರುವಾಗ ತಪ್ಪದೆ ಒಮ್ಮೆ ನೋಡಲೇಬೇಕು .            

 


No comments:

Post a Comment